ಶಶಿರಾಜ್ ರಾವ್ ಕಾವೂರ್

ವೃತ್ತಿಯಲ್ಲಿ ಮಂಗಳೂರಿನಲ್ಲಿ ವಕೀಲರಾಗಿದ್ದುಕೊಂಡು ಪ್ರವೃತ್ತಿಯಲ್ಲಿ ಹಲವಾರು ಕಲೆಗಳಲ್ಲಿ ಆಸಕ್ತಿ ಹೊಂದಿರುವ ಶಶಿರಾಜ್ ಕಾವೂರ್ ಬಹುಮುಖ ಪ್ರತಿಭೆ. 

ಇವರ ಚೊಚ್ಚಲ ತುಳು ಕವನ ಸಂಕಲನ ಪೊಸ ಒಸರ್ಗೆ 2007ರಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಿಂದ ಬಹುಮಾನ ಪ್ರಧಾನಗೊಂಡಿದೆ.

ತುಳು ಸಂಗೀತ ಲೋಕದಲ್ಲಿ ದಾಖಲೆ ಬರೆದ ವಾ ಪೊರ್ಲುಯಾ’ ‘ಕಡಲ ಪರ್ಬಯೆಮುಂತಾದ ಹಾಡುಗಳ ರಚನೆಗಾರ. ಏಕಾದಶಾನನ’ ‘ ಸರದಾರನ ಸ್ವಗತ’, ಬರ್ಬರೀಕ, ‘ಪೋಲಿ- ಟ್ರಿಕ್ಸ್’ ಮುಂತಾದ ಕನ್ನಡ ನಾಟಕಗಳನ್ನು ಬರೆದ ಶಶಿರಾಜ್ ಕಾವೂರ್ ರವರ ಏಕಾದಶಾನನನಾಟಕಕ್ಕೆ ಎರಡು ಬಾರಿ ರಾಷ್ಟ್ರೀಯ ರಂಗಪ್ರಶಸ್ತಿಲಭಿಸಿದೆ.
 ಕಡಲಮಗೆ, ಒರಿಯರ್ದೊರಿ ಅಸಲ್, ಮುಂತಾದ ಸಿನಿಮೆಗಳಿಗೆ ಕಂಠದಾನ ಕಲಾವಿದರಾಗಿಯೂ ತುಳು ಸಿನೆಮಾಗಳಿಗೆ ಸಾಹಿತ್ಯ ರಚನೆಕಾರರಾಗಿಯೂ ಕೆಲಸಮಾಡಿದ್ದಾರೆ. ಅವರ ಹೊಸ ಪುಸ್ತಕಗಳಾದ ಪಂರ್ದ್ ಪೆಲಕಾಯಿತುಳು ಕವನ ಸಂಕಲನ ಮತ್ತು "ಮಾಲೆ ಪಟಾಕಿ" ಹೊಸ ಸೃಜನಶೀಲ ಗಾದೆಗಳು ಗೊಂಚಲು ಇತ್ತೀಚೆಗೆ ಬಿಡುಗಡೆಗೊಂಡಿದೆ.

ಸುವರ್ಣವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ನವೀನ್ ಪಡೀಲ್ ಅಭಿನಯದ " ಗೊತ್ತಾನಗ ಪೊರ್ತಾಂಡ್ " ಧಾರಾವಾಹಿಯ ಪರಿಕಲ್ಪನೆ ಮತ್ತು ಸಂಭಾಷಣೆ ಬರೆದ ಶಶಿರಾಜ್ ಕಾವೂರ್ ಹೊಸ ಕಲಾತ್ಮಕ ಸಿನೆಮಾದ ತಯಾರಿಯಲ್ಲಿದ್ದಾರೆ.

No comments:

Post a Comment